Web presence by infouna
Manasumanasuma

BACK

ಸ್ಪಂದನ

By Dr. Vijaya Nayak on 14th February 2015

ನಿನ್ನ ನೆನಪೊಂದು ಸ್ಪಂದನ
ಚೆನ್ನರಸ- ನೀನೊಂದು ಮಧುರ ಕವನ
ಹನಿ ಹನಿ ಯಾಗಿ ಮತ್ತೆ ಪ್ರಳಯವೇ ತಾನಗಿ
ನನ್ನಿರವನ್ನೇ ಬುಡಮೇಲು ಮಾಡುವ ನೀನೊಮ್ಮೊಮ್ಮೆ
ಕಂಪನವನ್ನಡಗಿಸುವ ಆಂಧೋಳನ!

ಶ್ರೀ ಜಯದೇವನ ’ಗೀತ ಗೋವಿಂದ’
ನಿಜವಾಗಲೂ ಪರಿಚಯ ವಾದುದು ನಿನ್ನಿಂದ
ಪೂಜ್ಯನೇ-ಇರಲಿ ಹಾಗೆಯೇ ಅದರಂದ
ಆ ಜೇನು ಆ ಮಕರಂದ..

ಸರಿದಾಗ ಉದುರೆಲೆ, ಅವಳೆದೆಯಲ್ಲಿ
ಏರಿ ಬಂತಂತೆ ಉದ್ವೇಗದಲೆ,
ಬರದಾಗ ನೀ ಬರೆದೋಲೆ ಮನದ
ಚಕ್ರವಾಕದ ಮೇಲೆ ತುಮುಲದ ಬಲೆ!

ನಾನು ಹುಲ್ಲೆ ನೀನು ಹುಲ್ಲುಗಾವಲು
ನಿನ್ನೊಲವನಗೆ ಬೆಂಗಾವಲು
ಮನ ಹಾತೊರೆದಿದೆ ನಿನ್ನ ಕಾಣಲು..
ನಿನ್ನ ನೆನಪು ಹಚ್ಚ ಹಸಿರು ಯಾವಾಗಲೂ

ತುಂಬ ವಿಧದಲ್ಲಿ,ಅಂಬುಧಿ ಇದ್ದಂತೆ
ತುಂಬು ಹೃದಯದ ಪ್ರೀತಿಯಂತೆ-
ಯಾಕಂತಿಯಾ, ತಬ್ಬಿಬ್ಬುಗೊಳಿಸಿ ಏರಿಳಿವ
ತೆರೆಯಾಳದಲಿ ನೆಲೆಸಿಹುದು ಬೆಲೆಗೆ ನಿಲುಕದ
’ಮುತ್ತು’ ಮತ್ತು ಪ್ರಶಾಂತತೆ!!

- ಡಾ. ವಿಜಯಾ ನಾಯಕ್