Web presence by infouna
Manasumanasuma

BACK

ಶರಾವತಿ ಸಂಯುಕ್ತ ಭಾರತಿ

By Dr. Vijaya Nayak on 01st August 2014

ಥೇಮ್ಸ್ ಶರಾವತಿ ಸಂಯುಕ್ತ ಭಾರತಿ
೧೯೮೦/೮೫ ರಲ್ಲಿ ’ಕ ಚ ತ ಟ ಪ-ಗ ಜ ದ ಡ ಬ’ ಕವಿತೆ ಬರೆದ ದಿನಂದಿದ ಈದಿನದ ಶುಭೋದಯಕ್ಕಾಗಿ ಮನಸ್ಸು ಹಾತೊರೆಯುತ್ತಿತ್ತು..
೧೯೮೩/೪ ರಲ್ಲಿ ಥೇಮ್ಸ್ ದಡದಲ್ಲಿ ಕುಳಿತು ಕಾವೇರಿಯನ್ನು ರೇಷ್ಮೆಯಲ್ಲಿ ಚಿತ್ರಿಸಿ ಕನ್ನಡಬಳಗ ಯು.ಕೆ ಗೆ ಮುಖಪುಟ ಚಿತ್ರವಾಗಿ ಸಮರ್ಪಿಸಿದ,
೧೯೯೬/೭ ರಲ್ಲಿ ಹಡ್ಸನ್ ಬೇ ನೋಡಿಕೊಂಡು ಬಂದು ಎಮ್.ಐ.ಟಿ ಮಾಸ್ಸಾಚುಸೆಟ್ಟ್ಸ್ ನಲ್ಲಿ ಸ್ವರಚಿತ ಕವನವಾಚನ ಮಾಡಿದ ನನಗೆ,ಸಾಹಿತ್ಯ, ಕವನ,ಕವಿತೆ ಎಲ್ಲಾಹರಿವ ನೀರಿದ್ದಂತೆ, ಲೋಕ ಕಲ್ಯಾಣ ಕ್ಕಾಗಿ, ಆತ್ಮಪರಿಶುಧ್ಧತೆಗಾಗಿ, ಹಚ್ಚ ಹಸುರ ಶಾಂತಿ ಪೈರಿಗಾಗಿ, ಪ್ರಕೃತಿ ಯ ವೈಶಾಲ್ಯ ಹಾಗೂ ನಿಯತ್ತಿನ ಸಂಕೇತವಾಗಿ ಹರಿಯುತ್ತಲೇ ಇರಬೇಕು.. ಜನಕೋಟಿ ಅವರವರ ಭಾಷೆ ಸಂಸ್ಕೃತಿಗನುಸಾರವಾಗಿ ನಿನ್ನೆ ಇಂದು ನಾಳೆಯ ರೂಪ ರೇಷೆ ಗಳನ್ನು ನಿರ್ಮಿಸುತ್ತಾ ಜಗನ್ನಿಯಾಮಕನ ಅರಿವನ್ನು ಹೆಚ್ಚಿಸುತ್ತಾ ಸಾಗುತ್ತಿರಬೇಕು ಹರಿವನೀರಿನಂತೆನ್ನ ಕವಿತೆ ಎಂಬುದೇ ನನ್ನಗುರಿಯಾಗಿತ್ತು, ೧೯೬೯/೭೦ ರಿಂದ.. ಈ ಭಾವನೆ ಯಿಂದ ಕವಿತಾವಾಚನ ಮಾಡಿದ್ದಾಗ ಖುಷಿ ಪಟ್ಟುಕೊಂಡು ಮತ್ತೆ ಮತ್ತೆ ಆಲಿಸಿಕೊಂಡ
ಕವಿತೆ ಗಳು ( ನಾ ಕಂಡ ಮಂಡ್ಯ, ನೀನೂ ಛಲ ತೀರಿಸಿಕೊಳ್ಳಬೇಕೇ, ಮೊನ್ಸೂನ್ ಇನ್ ಮೈ ಟೌನ್, ಮುಂತಾದವು) ಈಗಿನ ಯುವಪೀಳಿಗೆ ಗೆ ಸಹ ಸಮ್ತಸ ಕೊಡುತ್ತಿರುವುದು.. ನನ್ನ ದೃಷ್ಟಿ ಯಲ್ಲಿ.. ೫೦ ವರುಷಗಳಲ್ಲಿ ಯುವಜನತೆ ಯೊಂದಿಗೆ, ಯುವಜನತೆಗಾಗಿ ಮಾಡಿದ ಗುಣಮಟ್ಟದ ಸಾಹಿತ್ಯ ಹಾಗೂ ಪ್ರಕೃತಿ ಯ ಸೇವೆಯ ಸಂಕೇತ, ಮುಂದೆಬರಲಿರುವ ಕೃತಿಗಳ ಮೊದಲು ಈಗಿನ ಯುವಜನತೆಗೆ ಶುಭಾಶಯಗಳನ್ನು ತಲುಪಿಸಲು ಅನುವು ಮಾಡಿ ಕೊಟ್ಟಒಂದು ಶ್ರೇಷ್ಟ ನಿಲುದಾಣ.. ಒಂದು ಗಳಿಗೆ ನಿಂತು ಈಗಿನ ವಾತಾವರಣವನ್ನು ವೀಕ್ಷಿಸಿ ಮತ್ತೆ ಮುಂದಡಿ ಇಡಲು ಸಹಾಯ
ವಾಗುವಂತಹ ಈ ನಿಲುದಾಣ ಗಳ ಬಗ್ಗೆ ಗೌರವವುಂಟಾಗ ಬೇಕಾದರೆ ನೀವು ಶ್ರೀ ವೈಷ್ಣೋ ಮಾತೆಯ ಯಾತ್ರೆ ನೆನಪು ಮಾಡಬೇಕು, ಅಥವಾ ಯಾತ್ರೆ ಮಾಡ್ಯೇವು ಅಂತ ಸಂಕಲ್ಪಿಸಿಕೊಂಡು ನೋಡಿ.. ಜೀವನದಲ್ಲಿ ಈ ನಿಲುದಾಣಗಳು ಎಷ್ಟು ಅನಿವಾರ್ಯ ಎಂಬುದು ಮನಸ್ಸಿಗೆ ನಾಟುತ್ತದೆ.. ಅದೇ ಪ್ರಕಾರ, ಈಗಿನ ಯುವಪೀಳಿಗೆಗೆ ನಮ್ಮ ಸಹಾಯ, ಸಹಾನುಭೂತಿ ಮತ್ತು ಗುಣಮಟ್ಟದ ಸಲಹೆಗಳನ್ನು ಯಾವ ಸಂಧರ್ಭದಲ್ಲಿ ಹೇಗೆ ತಲುಪಿಸಬೇಕು ಎಂಬುದನ್ನು ವಿಚಾರಾತ್ಮಕ ವಾಗಿ ಗಮನಿಸಬೇಕಾದರೆ ೫೦ ವರುಷ ಗಳಿಗೊಮ್ಮೆ ಯಾದರೂ ಒಂದು ನಿಲುದಾಣದ ಅಗತ್ಯ ವಿದೆ, ಆಗಲೇ, ಆಗಮಾತ್ರವೇ ನಿಮ್ಮ ಹೃದಯದಿಂದ ಎವರ್ ಗ್ರೀನ್, ಮತ್ತು ನಿಮ್ಮ ನಿತ್ಯ ನೂತನಮನದಿಂದ ಭಾವನೆಯ ಯಮುನೆ ಹರಿಯಲು ಸಾಧ್ಯವಿದೆ, ಭಾವನೆಯ ಯಮುನೆ ಕಾವೇರಿ ಆರುವ ಮುನ್ನ,ಅಂದರೆ, ಬೆಳೆದ, ಮಗ, ಮಗಳು, ವಿದ್ಯಾರ್ಥಿಗಳ ಮೇಲಿನ ಅಸಮಾಧಾನ ನಿಮ್ಮ ಕ್ರಿಯಾಶೀಲತೆ ಯನ್ನು ತಗ್ಗಿಸುವ ಮುನ್ನ, ನೀವೂ ಯುವ ಜನಾಂಗದ ಮೇಲೆ ಪ್ರೀತಿ ಹಾಗೂ ಶುಭಾಕಾಂಕ್ಷೆ ಗಳೊಂದಿಗೆ, ನೀವು ಕಲಿತುದ್ದನ್ನು ಆಧುನಿಕ ರೀತಿಯಲ್ಲಿ ಅವರಿಗೆ ತಿಳಿಸುವ ಪ್ರಯಾಸ ಮಾಡಿ, ಈ ತರಹ ಅವರಿಗಾಗಿ ಅಳುವಡಿಸಲ್ಪಟ್ಟ ಪುರಾತನ ರೀತಿ ನೀತಿ ಗಳನ್ನು ಅವರ ಮುಂದಿಟ್ಟಾಗ, ಅದರಿಂದಾಗಿ ಅವರ ತಿಳುವಳಿಕೆ, ಕುಟುಂಬ ಮತ್ತು ಸಮಾಜದಲ್ಲಿ ಅವರ ಹೊಂದಾಣಿಕೆ ಉತ್ತಮಗೊಂಡುದನ್ನು ನೋಡಿ ಸಂತೃಪ್ತಿ ಪಡೆದುಕೊಳ್ಳುವುದರಲ್ಲಿ ಯಶಸ್ವಿಗರಾಗಿ.
ಈ ಚಿಂತನೆ ಯನ್ನು ಕಾರ್ಯ ರೂಪದಲ್ಲಿ ತರಲು, ’ಮನಸುಮನಸುಮ’ದ ಸಂಸ್ಥಾಪಕಿಯಾಗಿ ನಾನು ಯುವಜನಾಂಗಕ್ಕಾಗಿ ಮಾತ್ರವೇ ಅನ್ವಯಿಸುವಂತೆ ’ಆಭಾ’ ಯೆಂಬ ವಿಭಾಗವನ್ನು ತೆರೆದಿರುತ್ತೇನೆ. (ಚಿಜoಟesಛಿeಟಿಣs/ಚಿಡಿಣ/behಚಿviouಡಿ/heಚಿಟಣh ಚಿಟಿಜ ಚಿಜರಿusಣmeಟಿಣ ಛಿeಟಿಣಡಿe, ಂಂಃಊಂ ಜಿoಡಿ shoಡಿಣ) ಈ ನಲತ್ತೆರಡು ವರುಷ ಗಳಲ್ಲಿ ಯುವಜನತೆ, ತಮ್ಮ ಆತಂಕ, ಚಡಪಡಿಕೆ, ಅಂಗಾರ ದಂತಹ ಕೋಪ ಇತ್ಯಾದಿ ಗಳಿಂದ, ಮನೆ ಬಿಟ್ಟು ಹೋಗಿಯೋ, ಜೀವಕ್ಕೆ ಅಪಾಯ ತಂದು ಕೊಂಡೋ, ನಿಮಗೆ,ನನಗೆ ಎಲ್ಲರಿಗೆ ಏನು ತಿಳಿಸ ಬಯಸಿರಬಹುದು, ನಾವು ಅವರಿಂದ ತಿಳಿಯುವುದೇನಿದೆ, ಈ ಎಲ್ಲ ಮಾಹಿತಿಯನ್ನು ಸೃಷ್ಟಿಕರ್ತನ ಆಣತಿ ಯಂತೆ ನಿಯಮಾನುಸಾರ ಎರಕಹಾಕಿ, ಅವರೊಳಗಿನ[೧] ವೈಯುಕ್ತತೆ, ಉತ್ತಮ ಗುಣಗಳನ್ನು,[೨] ಕ್ರಿಯಾಶೀಲತೆಯನ್ನು ಮತ್ತು[೩] ತನ್ನನ್ನು ತಾನು ಆಶಾಭಂಗದ ಇಳಿಜಾರಿನಿಂದ ಅಭಿವೃಧ್ಧಿಯೆಡೆಗೆ ನಡೆಸಿಕೊಂಡು ಹೋಗುವ ಸಾಧ್ಯತೆ ಯನ್ನು, ಹೆಚ್ಚಿಸುವ ಮನೋಕಾಂಕ್ಷೆ ನನ್ನದು.೪೨ವರುಷಗಳ ವೈದ್ಯಕೀಯ ಅನುಭವ, ೫೩ ವರುಷ ಗಳ ಕಲಾರಾಧನೆ ಮತ್ತು ಹುಟ್ಟಿದಂದಿನಿಂದ ರಕ್ತಗತವಾಗಿ ಬಂದಿರುವ ದೇವರಮೇಲಿನ ನಂಬಿಕೆ, ಈ ಮೂರೂ ಶಕ್ತಿ ಚೇತನಕ್ಕೆ ದೇವರ ಅನುಗ್ರಹ ವಿದ್ದುದರಿಂದ ‘ಆಭಾ‘ ರೂಪುತಳೆದಿದೆ.. ‘ಆಬಾ‘ ಕ್ಕೆ ಸಕಲ ಕನ್ನಡಿಗರ ಮತ್ತು, ಭಾರತ ಹಾಗೂ ‘ಆಭಾ‘ ದ ತಪಸ್ಸನ್ನು ಅರ್ಥ ಮಾಡಿಕೊಂಡ ವಿಶ್ವದ ಎಲ್ಲಾ ಶಕ್ತಿಶಾಲಿ ಸಂಸ್ಥೆ, ಮತ್ತು ಉದಯೋನ್ಮುಖ ಜನಶ್ರೇಷ್ಟರ ಸಹಾಯ, ಉತ್ತೇಜನ ಮತ್ತು ಮಾನ್ಯತೆ ಇರಲಿ,‘ಆಭಾ‘ ದ ಸಹಜಕಿರಣಗಳಿಂದ ಪ್ರಭಾವಿತರಾದ ಯುವಜನತೆ ತಮ್ಮನ್ನು ತಾವು ಕಂಡುಕೊಳ್ಳುವುದರ ಜತೆಗೆ ಇನ್ನೊಬ್ಬರಿಗೂ ಸಹಾಯಕರಾಗಿರುವುದರಲ್ಲಿ ಯಶಸ್ವಿಯಾಗಲಿ.
ನಿಮ್ಮೆಲ್ಲರ ಹರಕೆ, ಪ್ರೋತ್ಸಾಹದಿಂದ ‘ಆಭಾ‘ ಅಖಿಲ ಭಾರತದ ಫ಼ಸ್ಟ್ ಎವೆರ್ ‘ಇನ್ಸ್ಟಿಟ್ಯೂಟ್ ಫ಼್ಹೊರ್ ಪರ್ಸನಾಲಿಟಿ ಎನ್ಹಾನ್ಸ್ಮೆಂಟ್‘ ಆಗಿ ಮೆರೆಯಲಿ.
ಇನ್ನು, ‘ಆಬಾ‘ ಕ್ಕೆ ನಾನು ಉಪಕುಲಪತಿ ಯಾದರೆ, ಕುಲಪತಿಯೇ ಶ್ರೀ ಮಹಾಗಣಪತಿ.
ಕೆಲವು ವರುಷ ಗಳ ಹಿಂದೆ ನಾನು ಧ್ಯಾನದಲ್ಲಿದ್ದಾಗ ಒಂದು ದಿನ, ತರುಣ ಗಣಪತಿ ಯಾಗಿ ಬಂದು, ‘ನನ್ನಮೇಲೆ ಒಂದು ಸಾವಿರ ನುಡಿ ಬರೀಬೇಕು ನೀನು‘ ಎಂದು ಪ್ರಸನ್ನತೆಯಿಂದಲೇತಾಕೀತು ಮಾಡಿದ್ದ ಆಡುಬಾಷೆ ಯಲ್ಲಿಯೇ ಸರಳವಾಗಿ, ನಾನಿನ್ನೂ ಸ್ತಂಭೀಭೂತ ಳಾಗಿದ್ದಂತೆಯೇ ಮುಂದುವರಿಸಿ, ‘ಅದು ನಿನ್ನಿಂದಲೆನೇಸಾಧ್ಯ, ಆ ಸಾವಿರ ನುಡಿಗಳಲ್ಲಿ ಒಂದೂ ನನ್ನ ಠಿhಥಿsiಛಿಚಿಟ ಚಿಣಣಡಿibuಣes ಗಳು ಇರಕೂಡದು ಎಂದು ಇಂಗ್ಲಿಷ್ ನಲ್ಲಿ ಹೇಳಿ 'ಉoಜಟಥಿ, ಜiviಟಿe ಚಿಣಣಡಿibuಣes' ಮಾತ್ರವೇ ಇರಬೇಕು ಎಂದು ಪ್ರಸನ್ನತೆ ಯಿಂದಲೇ ಆದೇಶ ನೀಡಿದ್ದ! ನಾನು ಯಾವಾಗ ಹೇಗೆ ಬರೆದೇನು ಎಂದು ಗೊತ್ತಿಲ್ಲದಿದ್ದರೂ ’ಬರೀ ಬೇಕು’ ಬರೀಬೇಕು’ಯೆಂದು ಮನಸ್ಸು,ಹೃದಯ ಒತ್ತಾಯಪದಿಸುತ್ತಿತ್ತು.. ಕೆಲವು ವರುಷಗಳು ಕಳೆದರೂ ಜೂನ್ ೨೯/೩೦ ೨೦೧೪ ರಲ್ಲಿ, ಅಂದರೆ ಈಗ್ಗ್ಯೆ ಮೂರು ವಾರಗಳ ಹಿಂದೆ ಅನ್ನ,ನೀರು ನಿದ್ರೆ ಇಲ್ಲದಂತೆ ೬೭೧ ನುಡಿಗಳನ್ನು ಒಂದೇದಿನದಲ್ಲಿ ಬರೆಸಿ ಹರಸಿದ ಅಧ್ಭುತ ಗಣಪತಿ,ಮತ್ತೆ ಮೂರುದಿನಗಳಲ್ಲಿ, ಸಾವಿರ ನುಡಿಗಳನ್ನು ಬರೆದು ತಪ್ಪು ಮನ್ನಿಸುವಂತೆ ಕೇಳಿ ಕೊಂಡು ’ಅಭ್ಯುದಯ’ ಗಣಪತಿ ಎಂಬ ಶೀರ್ಷಿಕೆಯೊಂದಿಗೆ, ಪ್ರಸ್ತುತ ಪಡಿಸಿ ಪೂಜೆಗೆಇಟ್ಟೆ.. ಆನಂದ ಭಾಷ್ಪಗಳೊಂದಿಗೆ.. ಮಹಾಗಣಪತಿ ಯ ಚಮತ್ಕಾರ ಎಲ್ಲಿವರೇಗೆ ಇತ್ತೆಂದರೆ, ಸಾವಿರನುಡಿಗಳನ್ನೂ ಕ್ಂಪ್ಯೂಟರ್ ನಲ್ಲೇ ಬರೆದೆ.. ಹಿಂದಿನದಿನದ ವರೇಗೆ ಕ್ಂಪ್ಯೂಟರ್ ನಲ್ಲಿ ನಾನು ಒಂದು ಕನ್ನಡ ನುಡಿಯನ್ನೂ ಬರೆದಿರಲಿಲ್ಲ, ಬೇಸಿಕ್ ವರ್ಶನ್ ಯೆರಡುವರುಷ ಗಳಿಂದ ನನ್ನಬಳಿಇದ್ದರೂ!
’ಅಭ್ಯುದಯ’ ಗಣಪತಿ.. ಕರ್ನಾಟಕದ ಯೆಲ್ಲರಿಗಾಗಿ ಮುಖ್ಯವಾಗಿ ನನ್ನ ಪ್ರೀತಿಯ ಯುವಜನ ಪೀಳಿಗೆಗಾಗಿ.. ವೈದ್ಯಳಾಗಿ,
’ಟಿಕ್ ೨೦’ ಪೊಯಿಸನ್ ರಿಸರ್ಚ್ ಮಾದುವ ಹೊತ್ತಿಗೆ.. ಬಹಳ ಯುವ ಜನರ ಕಣ್ಣೀರನ್ನು ನೋಡಿದ್ದೇನೆ, ಚಿಛಿಚಿಜemiಛಿ ಣಡಿಚಿiಟಿiಟಿg ಮತ್ತು ಶಕ್ತಿ ಯಿಂದ ಮಾತ್ರವೇ ನನ್ನ ಕಣ್ಣೀರನ್ನು ತಡೆದುಕೊಂಡ ನೆನಪಿದೆ ನನಗೆ.., ಅವರಿಗೆಲ್ಲ ‘ಉಪಕಾರ ಸ್ಮರಣೆಯ‘ ಕಾಣಿಕೆ ಇದು. ಅಂತಹ ನನ್ನಪ್ರೀತಿಯ, ಇನ್ನೂ ಬಹಳ ಕಲೀಬೇಕು ಅಂತ ಆಸೆಯಿಂದಿರುವ ಕರ್ನಾಟಕ ಮತ್ತು ವಿಶ್ವದ ಯುವಜನಾಂಗಕ್ಕಾಗಿ, ಮಹಾ ಗಣಪತಿಯ ಆಶೀರ್ವಾದದೊಂದಿಗೆ ಮುಂಬರುವ ವಿನಾಯಕ ಚತುರ್ಥಿಗೆ ಸರಿಯಾಗಿ ತಲುಪಿಸುತ್ತಿದ್ದೇನೆ.. ಕನ್ನಡದ ವಾರ್ತಾಲೋಕದ ದಿಗ್ಗಜರ ಹಾರ್ದಿಕ ಸಹಕಾರದೊಂದಿಗೆ.. ’ಅಭ್ಯುದಯ’ ಗಣಪತಿಯನ್ನು ಓದು ಬರಹ ಇದ್ದವರ ಹಾಗೂ ಇಲ್ಲದವರ, ಕಲಿತು ನಾಳೆ ಮುಂದೆ ಬರಲಿರುವವರ, ಎಲ್ಲರ ಮನೆ ಮನಕ್ಕೆ ತಲುಪಿಸುವ ಜವಾಬ್ದಾರಿ ಕೆಲಸವನ್ನು ಯಶಸ್ವಿಯಾಗಿ ಪೂರೈಸುವ ’ಮಾಧ್ಯಮ’ ಪ್ರಪಂಚದ ನಿಷ್ಟಾವಂತರಿಗೆ ಮತ್ತೊಮ್ಮೆ ಅಭಿನಂದಿಸಿ, ಕೃತಜ್ನತೆ ಗಳೊಂದಿಗೆ ’ಆಭಾ’ ಹಾಗೂ‘ಅಭ್ಯುದಯ ಗಣಪತಿ‘ ಯೆಂಬ ಸಾಧನೆಯ ಬಾಳಿನ ಎರಡು ಅಂಕಣ ಗಳನ್ನು ಕರ್ನಾಟಕದ ಮಡಿಲಿನಲ್ಲಿ ಇಡುತ್ತಿದ್ದೇನೆ, ಸಾಧ್ಯತೆ ಯಿಂದ ಸಿಧ್ಧಿಯೆಡೆಗೆ ನಡೆಸು ಎಂದು ದೇವರಲ್ಲಿ ಹಾರೈಸಿ.
ಹೆಚ್ಚಿನ ಮಾಹಿತಿಗಾಗಿ ಸಂದರ್ಶಿಸಿ ಎಂದು ವಿನಂತಿ: web site: www.manasumanasuma.org